You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಸೂರ್ಯಮಂಡಲದ ರಹಸ್ಯವು ನಿಮ್ಮ ಕೈಯಲ್ಲಿ!!!
ಗ್ರಹಗತಿಯ ರಹಸ್ಯವನ್ನು ತಿಳಿದುಕೊಳ್ಳಲು ಮಯಾಸುರನಿಗೆ ಕಠಿಣ ತಪಸ್ಯೆ ಮಾಡಬೇಕಾಯಿತು ! ಆಗ ತಾನೇ ʼಸೂರ್ಯಸಿದ್ಧಾಂತʼದ ಉಗಮವಾದುದು! ಆರ್ಯಭಟ, ವರಾಹಮಿಹಿರರಂಥ ಮಹನೀಯರು ಸಾಮಾನ್ಯರಿಗೆ ಖಗೋಲ ಗಣಿತವನ್ನು ತಿಳಿಹೇಳಲು ಆರ್ಯಭಟೀಯಮ್, ಪಂಚಸಿದ್ಧಾಂತಿಕಾ ಮುಂತಾದ ಗ್ರಂಥಗಳನ್ನು ನಿರ್ಮಿಸಿದರು. ನ್ಯೂಟನ, ಗೆಲಿಲಿಯೊ, ಕೆಪ್ಲರರಂಥ ವಿಜ್ಞಾನಿಗಳು ಅನೇಕ ಶೋಧ ಮಾಡಿದಾಗ ʼಪ್ರಿನ್ಸಿಪಿಯಾ ಮೆಥಿಮೆಟಿಕಾʼದಂಥ ಗ್ರಣಥಗಳು ನಿರ್ಮಾಣವಾದವು. ಆದರೂ ಇವೆಲ್ಲ ಗ್ರಂಥಗಳು ತಮ್ಮ ಭಾಷೆಯಲ್ಲಿರದ ಕಾರಣ ಜನಸಾಮಾನ್ಯರು ಈ ಜ್ಞಾನದಿಂದ ವಂಚಿತರಾಗಿಯೇ ಉಳಿದರು.
ಈಗ ಈ ಜಟಿಲವಾದ ಖಗೋಲ ಗಣಿತದ ವಿಷಯವನ್ನು ಎಲ್ಲರಿಗೂ ತಿಳಿಯುವ ಹಾಗೆ ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿರ್ಪ ಕನ್ನಡ ಭಾಷೆಯಲ್ಲಿ ಪ್ರಕಟಿಸುವದರಲ್ಲಿ ಅತ್ಯಂತ ಸಂತೋಷವಾಗುತ್ತದೆ.
ಮನೋಹರ ನಾರಾಯಣ ಪುರೋಹಿತ
ಮನೋಹರ ನಾರಾಯಣ ಪುರೋಹಿತ ಇವರ ಜನ್ಮ ಕರ್ನಾಟಕದಲ್ಲಿ (೧೯೪೦) ಮತ್ತು ವಾಸ್ತವ್ಯ ಸೋಲಾಪುರ (ಮಹಾರಾಷ್ಡ್ರ)ದಲ್ಲಿ. ನಿವೃತ್ತ ಇಂಜಿನಯರಿಂಗ-ಅಧ್ಯಾಪಕರು. ಶಾಸಕೀಯ ಹಾಗೂ ಅಶಾಸಕೀಯ ಪಾಲಿಟಿಕ್ನಿಕಗಳಲ್ಲಿ ಅಪ್ಲೈಡ ಮೆಕ್ಯಾನಿಕ್ಸ ಹಾಗೂ ಸ್ಟ್ರಕ್ಚರಲ್ ಡಿಝೈನ್ ಇವರ ಅಧ್ಯಾಪನದ ವಿಷಯಗಳಾಗಿದ್ದವು. ಕೆಲವು ವಿದ್ಯಾರ್ಥಿಗಳಿಗೆ ಪದವ್ಯುತ್ತರ ಪರೀಕ್ಷೆಗಳಿಗಾಗಿಯೂ ಮಾರ್ಗದರ್ಶನ ಮಾಡಿದ್ದಾರೆ. Institution of Engineers (Indi) (MIE) Indian Society for Technical Education (AISTE) ಈ ಸಂಸ್ಥೆಗಳ ಆಜೀವನ ಸದಸ್ಯರು. ಸಂಗೀತ, ಗಣಿತ, ಜ್ಯೋತಿಷ್ಯ, ಖಗೋಲಶಾಸ್ತ್ರ, ಕನ್ನಡ ಮತ್ತು ಸಂಸ್ಕೃತ ಕಾವ್ಯಗಳನ್ನು ಓದುವದರಲ್ಲಿ ಹವ್ಯಾಸ. ಸಂಗೀತದಲ್ಲಿ ʼಸಂಗೀತ ಅಲಂಕಾರʼ ಮತ್ತು ʼಸಂಗೀತ ಕಲಾರವಿಂದʼ ಪದವಿಗಳನ್ನು ಪಡೆದಿರುವರು. ಸತಾರ, ಸಂತೂರ, ವಾಯೋಲಿನ, ಹಾರ್ಮೋನಿಯಮ, ತಬಲಾ ಮುಂತಾದ ವಾದ್ಯಗಳನ್ನು ನಡಿಸುವದರಲ್ಲಿ ಪ್ರಾವೀಣ್ಯ ಹೊಂದಿರುವರು.
ಜ್ಯೋತಿಷ್ಯದಲ್ಲಿ ʼಜ್ಯೋತಿಷ್ಯ ವಿಶಾರದʼ ಮತ್ತು ʼಜ್ಯೋತಿಷ್ಯ ಶಾಸ್ತ್ರಿʼ ಪದವಿಗಳನ್ನು ಪಡೆದಿದ್ದಾರೆ.
ಇವರು ಖಗೋಲಣಿತ ಹಾಗೂ ಕಾಂಪ್ಯೂಟರ ಪ್ರೋಗ್ರ್ಯಾಮಿಂಗ ತಜ್ಞರು ಹಾಗೂ ಯಶಸ್ವೀ ಲೇಖಕರೂ ಆಗಿರುವರು. ಇವರು ರಚಿಸಿದ 'A Guide to Astronomical Calculations' ಮತ್ತು 'Python Programs for Astronomical Solutions' ಈ ಪುಸ್ತಕಗಳು ಜಗದಾದ್ಯಂತ ಜನಪ್ರಿಯವಾಗಿವೆ. ʼಸಂಪೂರ್ಣ ಖಗೋಲ ಗಣಿತʼ ಎಂಬ ಹಿಂದಿ ಆವೃತ್ತಿಯೂ ಕಳೆದ ವರ್ಷ ಪ್ರಕಾಶಿತವಾಗಿದೆ. ಅಂಧ್ರಪ್ರದೇಶದಲ್ಲಿಯ ಎರಡು ಸಂಸ್ಥೆಗಳು ಲೇಖಕರನ್ನು ʼಅಭಿನವ ವರಾಹಮಿಹಿರʼ ಎಂಬ ಪದವಿಯಿಂದ ಸನ್ಮಾನಿಸಿರುವವು. ತಿಳಿಗನ್ನಡದಲ್ಲಿಯ ಈ ಪುಸ್ತಕವು ಅವರ ಮುಕುಟದಲ್ಲಿ ಮತ್ತೊಂದು ಮಣಿ.
The items in your Cart will be deleted, click ok to proceed.